AVISHKAR 2020 - 11 Jan 2020, MOODSHEDDE
ವಿಷನ್ ಕುಡ್ಲ ಮಂಗಳೂರು ಇದರ ವತಿಯಿಂದ ಸರಕಾರಿ ಪ್ರೌಡಶಾಲೆಯಲ್ಲಿ Science Exhibition ಏರ್ಪಡಿಸಿದ್ದೆವು. ಇದರಲ್ಲಿ ೩೨ ಸ್ಪರ್ಧಾಳುಗಳು ಪಾಲ್ಗೋಂಡಿದ್ದರು. ಪಿಲಿಕುಳ ವಿಜ್ಞಾನ ಕೇಂದ್ರದ ನಿರ್ದೇಶಕರಾದ ಡಾ. ಕೆ. ವಿ. ರಾವ್ ಹಾಗೂ ತೀರ್ಪುಗಾರರಾಗಿ ಶ್ರೀನಿವಾಸ್ ತಾಂತ್ರಿಕ ಆಸೋಸಿಟೇಡ್ ಕಾಲೇಜಿನ ಪ್ರೋಫೆಸರ್ ದೀಪಕ್ ರಾಜ್ ಮತ್ತು ನರಸಿಂಗ ರಾವ್ (ನೈಜೀರಿಯ ನಿವೃತ್ತ ಪ್ರೀನ್ಸಿಪಾಲ್) ಆತಿಥಿಗಳಾಗಿ V4 Digital Infotech ನ ನಿರ್ದೇಶಕರಾದ ಶ್ರೀನಿವಾಸ್ ಕಿಣಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಪ್ರೌಡಶಾಲೆಯ ಮುಖ್ಯ ಉಪಾದ್ಯಾಯಿನಿ ಸರಿತ ಅವರು ಪಾಲ್ಗೊಂಡಿದ್ದರು. ವಿಷನ್ ಕುಡ್ಲ ಟ್ರಸ್ಟ್ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡಲಾಯಿತು. ವಿಷನ್ ಕುಡ್ಲದ ಎಲ್ಲಾ ಪದಾಧಿಕಾರಗಳು ಹಾಗೂ ಸದಸ್ಯರು ಪಾಲ್ಗೋಂಡಿದ್ದರು.
ರಕ್ತದಾನ ಶಿಬಿರ - 20 Oct 2019
ದಾನದಲ್ಲಿ ಶ್ರೇಷ್ಠದಾನ ರಕ್ತದಾನ ಈ ಧ್ಯೇಯಯೊಂದಿಗೆ ವಿಷನ್ ಕುಡ್ಲದವರು ಸಿದ್ದಿವಿನಾಯಕ ಮಂದಿರ ಬೀರಿ ಇದರ ವಠಾರದಲ್ಲಿ ಬ್ರಹತ್ ರಕ್ತದಾನ ಶಿಬಿರವನ್ನು ಎರ್ಪಡಿಸಿದ್ದರು.
ಗುರುಸ್ವಾಮಿ ದಿ. ಕೆ. ಆರ್. ಪ್ರಭಾಕರ್ ಇವರ ಸ್ಮರಣಾದರ ವಿಷನ್ ಕುಡ್ಲದವರು KMC ಆಸ್ಪತ್ರೆ ಮಂಗಳೂರು ಅವರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಿದ್ದರು. ಇದರಲ್ಲಿ ವಿಷನ್ ಕುಡ್ಲದ ಹೆಚ್ಚಿನ ಪಧಾದಿಕಾರಿಗಳು ಮತ್ತು ಸದಸ್ಯರು ತಮ್ಮ ರಕ್ತದಾನವನ್ನು ನೀಡಿ ಮಾದರಿಯಾದರು. ಅದೂ ಅಲ್ಲದೆ ಸ್ನೇಹ ಸಂಗಮ ಇದರ ಸದಸ್ಯರು ಕೂಡ ರಕ್ತ ದಾನ ನೀಡಿದರು ಸರಿ ಸುಮಾರು ೯೫ Bottle.
GUESTS
ಶ್ರೀನಿವಾಸ್ ಕೆ.
NMPT Rtd Electrical Engineer
ಧನಲಕ್ಷ್ಮಿ ಗಟ್ಟಿ
ಜಿ. ಪ. ಸದಸ್ಯ
ಡಾ. ಪುಷ್ಪ ಶೆಟ್ಟಿ
ವೈದ್ಯಕೀಯ ಸಹಾಯ (ಅನೀಶ್) - 5 April 2017
ಅನೀಶ್ ಮಂಗಳೂರು ಜೆಷ್ಮ ಶೆಟ್ಟಿ ಬೆಟ್ಟು ನಿವಾಸಿ (ಚಿನ್ನು) ಎಂಬಾತನ ಆರೋಗ್ಯ ಏರು ಪೇರಾಗಿ ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾತಿ ಆದರು. ಆದರೆ ಅವರಿಗೆ ತುರ್ತಾಗಿ ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇತ್ತು ಆದರೆ ಅವರ ಮನೆಯ ಪರಿಸ್ಥಿತಿಯಲ್ಲಿ ಅನೀಶ್ ರವರ ಚಿಕಿತ್ಸೆ ಮಾಡುವುದು ಕಷ್ಟ ಸಾಧ್ಯ ಎಂದು ಮನಗಂಡು ವಿಷನ್ ಕುಡ್ಲದವರು ತುರ್ತಾಗಿ ಸಹಾಯ ಹಸ್ತ ನೀಡಿದರು. ಅಲ್ಲಿನ ವೈದ್ಯರು ಹಾಗೂ ಸಿಬ್ಂದಿ ವರ್ಗದೊಂದಿಗೆ ಮಾತಾಡಿ ಅನೀಶ್ ಚಿಕಿತ್ಸೆಯ ಎರ್ಪಾಡು ಮಾಡಿದ್ದರು. ಅದೂ ಅಲ್ಲದೇ ಧರ್ಮಸ್ಥಳ ಗ್ರಾಮ ಅಭಿವೃಧ್ದಿ ಅವರೊಡನೆ ಚರ್ಚಿಸಿ ಅವರಿಂದ ಕೂಡ ಧನ ಸಹಾಯ ನೀಡಿಸಿದ್ದೆವು.
ವಿಷನ್ ಕುಡ್ಲದವರು 15,000/- ದ ಚೆಕ್ಕನ್ನು ಅನೀಶ್ ರವರ ತಾಯಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಿಷನ್ ಕುಡ್ಲ ಅಧ್ಯಕ್ಷರಾದ ಜಿತೇಂದ್ರ ಹಾಗೂ ಕಾರ್ಯಾದರ್ಶಿ ರಾಜರಾಮಾ, ಖರಿಬಾರವಿ ಸಯಾಷ್ಟ ರೂವಾರಿ ಸದಸ್ಯರಾದ ಮಂದಿತ್ ಮತ್ತು ನಿಶ್ಚಿತ್ ಶೆಟ್ಟಿ ಉಪಸ್ಠಿತರಿದ್ದರು.
ವೈದ್ಯಕೀಯ ಸಹಾಯ (ಗಗನ್)
ಮಂಗಳೂರಿನ ಕೋಟೆಕಾರು ಮಾಡೂರು ಎಂಬಲ್ಲಿ ವಾಸವಿರುವ ಗಗನ್ ಎಂಬಾತ ಉತ್ತಮ ಕ್ರೀಡಾಪಟು ಕೂಡ ಹೌದು. ಪ್ರೌಡಶಾಲೆಯಲ್ಲಿ ಹಲವಾರು ಕ್ರಿಡಾ ಪ್ರಶಸ್ತಿಗಳನ್ನು ಮುಡಿಗೇರಿಸಿದ ಗಗನ್ ಇದಕ್ಕಿದ್ದಂತೆ ಆರೋಗ್ಯ ತೊಂದರೆಗೆ ಒಳಗಾಗುತ್ತಾನೆ. ಎಷ್ಟು ಹೇಳಿದರೆ ನಡೆದಾಡಲು ಕೂಡ ತುಂಬಾ ಕಷ್ಟ ಎಂಬ ಪರಿಸ್ಥಿತಿಗೆ ಬಂದಿರುತಾನೆ. ಈ ಸಂದರ್ಭದಲ್ಲಿ ವಿಷನ್ ಕುಡ್ಲ ರಾಮಚಂದ್ರ ಹಾಗೂ ಆಶೋಕ್ ಉಚ್ಚಿಲ್ ವಿಷನ್ ಕುಡ್ಲದ ಸಬೆಯಲ್ಲಿ ಈ ಪ್ರಸ್ತುತವನ್ನು ಇಟ್ಟು ವಿಷನ್ ಕುಡ್ಲದ ವತಿಯಿಂದ ಸಹಾಯ ಅಂದರೆ ಅವರ ಮನೆಯ ಪರಿಸ್ಥಿತಿಯ ಆಧಾರದ ಮೇರೆಗೆ ಧನ ಸಹಾಯ ನೀಡುವುದು ಎಂದು ತಿರ್ಮಾನಿಸಿ ವಿಷನ್ ಕುಡ್ಲ ಜೀತಂದ್ರ ಆಶೋಕ್ ಉಬ್ಬಣ, ಕಿಶೋರ್ ಬಂಗೇರ, ಸಂತೋಷ, ರಾಜರಾಮ, ರಾಮಚಂದ್ರ ಗಟ್ಟಿ ಈವರೊಡನೆ ಸೇರಿ ಗಗನ್ ವೈದ್ಯಕೀಯ ಚಿಕಿತ್ಸೆಗೆ A. J. Hospital & Research Centre ದಾಖಲಾತಿ ಆಗಿರುವುದು ತಿಳಿದು ಅವನ ತಾಯಿಗೆ ವೈದ್ಯಕೀಯ ಸಹಾಯ ಹಸ್ತವಾಗಿ 25,000/- ಚೆಕ್ಕನ್ನು ನೀಡುರುತ್ತಾರೆ.
ವೈದ್ಯಕೀಯ ಸಹಾಯ (ಮನ್ವಿತ) - 26 September 2017
ಮನ್ವಿತ ಎಂಬ ಪುಟ್ಟ ಮಗು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಮಂಗಳೂರು ಪ್ರತಿಷ್ಠಿತ ಕೆ. ಎಂ. ಸಿ. ಆಸ್ಪತ್ರೆ ಮಂಗಳೂರು ದಾಖಲಾತಿ ಆಗಿದ್ದು ಸಹಾಯಕ್ಕಾಗಿ ಮೊರೆ ಹೋಗಿದ್ದರು. ಈ ವಿಶಯ ತಿಳಿದು ವಿಷನ್ ಕುಡ್ಲದವರು 15,000/- ರೂ ನ ಚೆಕ್ಕನ್ನು ಮನ್ವಿತ ಅವರ ತಾಯಿ ಚಿತ್ರ ಕಿರಣರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಿಷನ್ ಕುಡ್ಲದ ಅಧ್ಯಕ್ಷರಾದ ಜಿತೇಂದ್ರ, ಕಾರ್ಯದರ್ಶಿ ರಾಜರಾಮ್ ಮತ್ತು ಖರಿಬಾರವಿ ಸಂತೋಷ್ ಹಾಗೂ ವಿಷನ್ ಕುಡ್ಲದ ರಾಮಚಂದ್ರ ಹಾಗೂ ಪ್ರವೀಣ್ ಮುಖ್ಯ ಉಪಸ್ಥಿತರಿದ್ದರು.
ತಿರುವೈಲು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ - 17 August 2017 - ಸರಕಾರಿ ಹಿ. ಪ್ರ. ಶಾಲೆ, ಮೂಡುಶೆಡ್ಡೆ
ವಿಷನ್ ಕುಡ್ಲ ಇದರ ವತಿಯಿಂದ ತಾ. ೧೭/೮/೨೦೧೭ ರಂದು ತಿರುವೈಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಸರಕಾರಿ ಹಿ. ಪ್ರ. ಶಾಲೆ ಮೂಡುಶೆಡ್ಡೆಯಲ್ಲಿ ಹಮ್ಮಿ ಕೊಳ್ಳಲಾಯಿತು. ಹಲವಾರು ಪ್ರತಿಭೆಗಳನ್ನು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ವಿಷನ್ ಕುಡ್ಲ ಏರ್ಪಡಿಸಿತ್ತು. ಸ. ಹಿ. ಪ್ರಾ. ಶಾಲೆಯ ಹೆಡ್ ಮಾಸ್ಟರ್ ಅವರ ಮಾರ್ಗದರ್ಶನದಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮ ರೂಪುಗೊಂಡಿತ್ತು. ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ. ೩೦ ನಿಮಿಷದ ಸಭಾ ಕಾರ್ಯಕ್ರಮ. ಆ ನಂತರ ಪ್ರತಿಭಾ ಕಾರ್ಯಕ್ರಮ ನೆರವೇರಿತು. ವಿಷನ್ ಕುಡ್ಲದ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲುಗೊಂಡಿದ್ದರು.
